Top News

ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ತಂದರೆ ನಾನು ಸುಮ್ಮನಿರುವುದಿಲ್ಲ, : ವಿಜಯೇಂದ್ರಗೆ ಶಾಸಕ ಯತ್ನಾಳ್ ಎಚ್ಚರಿಕೆ

ವಿಜಯಪುರ : ವಿನಾಕಾರಣ ನನ್ನ ವೈಯುಕ್ತಿಕ ವಿಷಯಗಳಿಗೆ ಸುಳ್ಳು ಸೇರಿಸಿ ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ತಂದರೆ ನಾನು ಸುಮ್ಮನಿರುವುದಿಲ್ಲ, ನಿನ್ನ ಇತಿಹಾಸ ನನ್ನ ಬಳಿ ಇದೆ, ನಿನ್ನದಷ್ಟೇ ಅಲ್ಲ ನಿಮ್ಮ ಅಪ್ಪ - ಅಮ್ಮನ ಇತಿಹಾಸವನ್ನು ಜಾಲಾಡಬೇಕಾಗುತ್ತದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಮತ್ತೊಮ್ಮೆ ಖಾರವಾಗಿ ಹಾಗೂ ಏಕವಚನದಲ್ಲಿ ಗುಡುಗಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಅಡ್ಡ ಮತದಾನ ಮಾಡಿರುವೆ ಎಂಬಿತ್ಯಾದಿ ಆಧಾರ ರಹಿತ ವಿಷಯಗಳನ್ನು, ನನ್ನ ಕುಟುಂಬದ ವಿಷಯವನ್ನು ವಿಜಯೇಂದ್ರ ತನ್ನ ಛೇಲಾಗಳಿಂದ ಸಾಮಾಜಿಕ ಜಾಲತಾಣಗಳಿಂದ ಹರಿಬಿಡುವುದನ್ನು ಇಲ್ಲಿಗೆ ನಿಲ್ಲಿಸಬೇಕು, ಈ ಛಾಳಿ ಆತ ನಿಲ್ಲಿಸದೇ ಹೋದರೆ ಆತನ ಜನ್ಮ ಜಾಲಾಡಬೇಕಾಗುತ್ತದೆ, ಆತನ ಅಷ್ಟೇ ಅಲ್ಲ ಅವನ ಅಪ್ಪನ ಇತಿಹಾಸವೂ ನನ್ನ ಕಡೆ ಇದೆ, ಇದನ್ನು ಇಲ್ಲಿಗೆ ಸ್ಟಾಪ್ ಮಾಡು ಎಂದು ಖಾರವಾಗಿ ಒತ್ತಾಯಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರನೇ ಡಿ.ಕೆ. ಶಿವಕುಮಾರಗೆ ಅನುಕೂಲವಾಗಲು ಅಡ್ಡ ಮತದಾನ ಮಾಡಿಸಿ ನೆರವಾಗಿದ್ದಾನೆ, ಡಿ.ಕೆ. ಶಿವಕುಮಾರ ತನ್ನ ಹಗರಣಗಳನ್ನು ಹೊರಗೆ ತೆಗೆಯುತ್ತಾನೆ ಎಂದು ಹೆದರಿ ತಾನೇ ಕೆಲವು ಶಾಸಕರಿಗೆ ಕಾಂಗ್ರೆಸ್‌ಗೆ ಮತದಾನ ಮಾಡುವಂತೆ ನೋಡಿಕೊಂಡಿದ್ದಾನೆ, ಇಂತಹ ನಾಲಾಯಕ್ ವ್ಯಕ್ತಿ ಆತ ಎಂದು ವಾಗ್ದಾಳಿ ನಡೆಸಿದರು.

ಆದರೆ ನಾನೇ ಅಡ್ಡಮತದಾನ ಮಾಡಿರುವೆ ಎಂದು ಛೇಲಾಗಳ ಮೂಲಕ ತಪ್ಪು ಬಿಂಬಿಸಲು ಹೊರಟಿದ್ದಾನೆ, ಆತ ಇಲ್ಲಿಗೆ ಬಿಡಬೇಕು, ಇಲ್ಲವಾದರೆ ನಾನು ಸುಮ್ಮನೆ ಕೂರುವುದಿಲ್ಲ ಎಂದು ಗುಡುಗಿದ್ದಾರೆ.

Post a Comment

ನವೀನ ಹಳೆಯದು